ಎಸ್.ಬಿ.ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಬಾಲಸುಬ್ರಹ್ಮಣ್ಯಂ.ಟಿ.ಸಿ ಹಾಗೂ ಶ್ರೀನಿವಾಸ್.ಬಿ.ವಿ ಅವರು ನಿರ್ಮಿಸಿರುವ ‘ಶಾರ್ಪ್ ಶೂಟರ್ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ
ಗೀತರಚನೆಕಾರ ಗೌಸ್ಪೀರ್ ನಿರ್ದೇಶನದ ಈ ಚಿತ್ರಕ್ಕೆ ಶಿವಸಂತೋಷ್ ಸಂಗೀತ ನೀಡಿದ್ದಾರೆ. ಕರುಣಾಕರ್ ಛಾಯಾಗ್ರಹಣ ಹಾಗೂ ದೀಪು.ಎಸ್.ಕುಮಾರ್ ಅವರ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು, ಮಾಸ್ ಮಾದ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ದಿಗಂತ್, ಸಂಗೀತಾ, ಲಕ್ಷ್ಮೀ(ಜ್ಯೂಲಿ), ಸುಧಾರಾಣಿ, ಚಿಕ್ಕಣ್ಣ, ಅಚ್ಯುತ್ಕುಮಾರ್, ಸತ್ಯಜಿತ್, ಸರ್ದಾರ್ ಸತ್ಯ, ಮಿತ್ರ, ಲೋಕಿ ಮುಂತಾದವರಿದ್ದಾರೆ. ಅಂದ್ರಿತಾ ರೇ ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ.